ಭಾರತ ಗಣರಾಜ್ಯ Bhārata Gaņarājya (ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಹೆಸರು) | |
|---|---|
| Motto: "ಸತ್ಯಮೇವ ಜಯತೆ" (ಸಂಸ್ಕೃತ) "ಸತ್ಯವೇ ಜಯಿಸುತ್ತದೆ [೧] | |
| Anthem: ಜನ ಗಣ ಮನ[೨][೩][೪] "ನೀನು ಎಲ್ಲ ಜನರ ಮನಸ್ಸಿನ ಆಡಳಿತಗಾರ"[೫][೩] | |
| ರಾಷ್ಟ್ರಗಾನ[೬] ವಂದೇ ಮಾತರಂ (ಸಂಸ್ಕೃತ) ತಾಯಿಯೇ, ನಾನು ನಿನಗೆ ನಮಸ್ಕರಿಸುತ್ತೇನೆ[೭] | |
ಭೂಗೋಳದಲ್ಲಿ ಭಾರತದ ಸ್ಥಾನ | |
| ರಾಜಧಾನಿ | ನವದೆಹಲಿ 28°36′50″N 77°12′30″E / 28.61389°N 77.20833°E |
| Largest city | ಮುಂಬೈ |
| ಅಧಿಕೃತ ಭಾಷೆಗಳು | ▪ಕೇಂದ್ರ ಸರ್ಕಾರದ ಅಧಿಕೃತ ಭಾಷೆ: ಹಿಂದಿ ಮತ್ತು ಆಂಗ್ಲ ಭಾಷೆ |
| Recognised national languages | ಯಾವುದು ಇಲ್ಲ |
| ಇತರೆ ಅಧಿಕೃತ ಮತ್ತು ರಾಜ್ಯಮಟ್ಟದ ಭಾಷೆಗಳು | ಸಂವಿಧಾನದ ಎಂಟನೆಯ ಅನುಸೂಚಿಯ ಅಡಿಯಲ್ಲಿ ಮಾನ್ಯತೆ ಪಡೆದ ಭಾಷೆಗಳು
ಅಸ್ಸಾಮಿ• ಬೆಂಗಾಲಿ• ಬೋಡೊ• ಡೋಗ್ರಿ• ಗುಜರಾತಿ• ಹಿಂದಿ• ಕನ್ನಡ• ಕಾಶ್ಮೀರಿ• ಕೋಕ್ ಬರೋಕ್• ಕೊಂಕಣಿ• ಮೈಥಿಲಿ• ಮಲಯಾಳಂ• ಮಣಿಪುರಿ• ಮರಾಠಿ• ಮಿಝೋ• ನೇಪಾಳಿ• ಒರಿಯಾ• ಪಂಜಾಬಿ •ಸಂಸ್ಕೃತ• ಸಂತಾಲಿ• ಸಿಂಧಿ• ತಮಿಳು• ತೆಲುಗು• ಉರ್ದು• ▪447 ಸ್ಥಳೀಯ ಭಾಷೆಗಳು |
| ಧರ್ಮ (೨೦೧೧) |
|
| ಸದಸ್ಯತ್ವ | ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ, ಬ್ರಿಕ್ಸ್ ಸಂಘಟನೆ, ಸಾರ್ಕ್ ಸಂಸ್ಥೆ, Shanghai Cooperation Organisation, G4 nations, Group of Five, G8+5, ಜಿ೨೦, ಕಾಮನ್ವೆಲ್ತ್ ರಾಷ್ಟ್ರಗಳು |
| ಸರ್ಕಾರ | ಸಂಯುಕ್ತ ಗಣತಂತ್ರ ಸಂಸದೀಯ ಪ್ರಜಾತಂತ್ರ[೮] |
| ದ್ರೌಪದಿ ಮುರ್ಮು | |
| ಜಗದೀಪ್ ಧಂಖರ್ | |
| ನರೇಂದ್ರ ಮೋದಿ | |
| ಎನ್.ವಿ.ರಮಣ | |
| ಶಾಸಕಾಂಗ | ಸಂಸತ್ತು |
| ರಾಜ್ಯಸಭೆ | |
| ಲೋಕಸಭೆ | |
| ಸ್ವಾತಂತ್ರ್ಯ ಯುನೈಟೆಡ್ ಕಿಂಗ್ಡಂನಿಂದ | |
• ಘೋಷಿತ | ೧೫ ಆಗಸ್ಟ್ ೧೯೪೭ |
• ಗಣರಾಜ್ಯ | ೨೬ ಜನವರಿ ೧೯೫೦ |
| Area | |
• Total | Lua error in package.lua at line 80: module 'Module:ConvertIB/data' not found. (7th) |
• Water (%) | 9.6 |
| ಜನಸಂಖ್ಯೆ | |
• 2022 estimate | 1,375,586,000[೯] (2nd) |
• 2011 census | 1,210,854,977[೧೦][೧೧] (2nd) |
• Density | Lua error in package.lua at line 80: module 'Module:ConvertIB/data' not found. (30th) |
| GDP (PPP) | 2022 estimate |
• Total | |
• Per capita | |
| GDP (nominal) | 2022 estimate |
• Total | |
• Per capita | |
| Gini (2011) | 35.7[೧೩][೧೪] medium |
| HDI (2021) | medium · 132nd |
| Currency | ಭಾರತದ ರೂಪಾಯಿ (₹) (ಐಎನ್ಆರ್) |
| Time zone | UTC+೫:೩೦ (ಐಎಸ್ಟಿ) |
| UTC+೫:೩೦ (ಆಚರಣೆಯಲ್ಲಿ ಇಲ್ಲ) | |
| Driving side | ಎಡಗಡೆ |
| Calling code | +೯೧ |
| Internet TLD | .in |
Non-numbered Footnotes:
| |
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ ಹಾಗೂ ಭೂತಾನ, ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಶ್ರೀಲಂಕಾ, ಮಾಲ್ಡೀವ್ಸ್ ನಂತಹ ದ್ವೀಪ ರಾಷ್ಟ್ರಗಳಿಗೆ ಹತ್ತಿರವಾಗಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.
ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಗಳು ಭಾರತದಲ್ಲಿ ಆರಂಭವಾಗಿವೆ. ಝೊರಾಷ್ಟ್ರಿಯನಿಜ಼ಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ.ಶ ೭ನೇ ಶತಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಆಕ್ರಮಣಗೊಂಡು ಇಂಗ್ಲೆಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.
ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ವೃಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದೂಸ್ಥಾನ ಕೂಡ ಒಂದು.
ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ಕಣಿವೆ ನಾಗರೀಕತೆ ಅಸ್ತಿತ್ವದಲ್ಲಿತ್ತು. ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. ಮೌರ್ಯ ಸಾಮ್ರಾಜ್ಯ ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭(77) ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ.
ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:
ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ.


ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ:
ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು,[೧೭] ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯಾ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್.
ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ ಮುಂಬಯಿ, ದೆಹಲಿ, ಬೆಂಗಳೂರು, ಕೋಲ್ಕತ್ತ ಮತ್ತು ಚೆನೈ ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ.
1901 ಮತ್ತು ನಂತರದ ಜನಗಣತಿ
| ಇಸವಿ | ಒಟ್ಟು ಜನಸಂಖ್ಯೆ | ಗ್ರಾಮೀಣ | ನಗರ : | ಶೇಕಡವಾರು ಜನಸಂಖ್ಯೆಯ ದರ ಏರಿಕೆ |
|---|---|---|---|---|
| 1901 | 238,396,327 | 212,544,454 | 25,851,573 | |
| 1911 | 252,093,390 | 226,151,757 | 25,941,633 | |
| 1921 | 251,351,213- | 223,235,043- | 28,086,170 | |
| 1931 | 278,977,238 | 245,521,249 | 33,455,686 | |
| 1941 | 318,660,580 | 275,507,283 | 44,153,297 | |
| 1951 | 362,088,090- | 298,644,381- | 62,443,709 | |
| 1961 | 439,234,771 | 360,298,168- | 78,936,603 | 21.6% |
| 1971 | 548,159,652 | 439,045,675 | 109,113,677 | 24.8% |
| 1981 | 683,329,097 | 623,866,550- | 159,462,547 | 24.7% |
| 1991 | 846,302,688 | 628,691,676 | 217,611,012 | 23.9% |
| 2001 | 1,028737,436 | 742,490,639 | 386,119,689 | 21.5% |
| 2011 | 1,21,01,93,422 | 83,30,87,662 | 37,71,05,760 | 17.6%//68.84 ಗ್ರಾಮ //31.16ನಗರ |
| 2011 | 1,21,01,93,422 | 62,37,24,248; ಪುರುಷರು | 58,64,69,174 ಮಹಿಳೆಯರು | 1000 ಪುರುಷರಿಗೆ
943-ಮಹಿಳೆಯರು |
| ಇಸವಿ | ಒಟ್ಟು ಜನಸಂಖ್ಯೆ | ಏರಿಕೆ | |
|---|---|---|---|
| 2011 | 1,210,193,422 | 17.6% |
ದಪ್ಪಗಿನ ಅಕ್ಷರ
| ವರ್ಷ | ಕಾಂಗ್ರೆಸ್.ಸ್ಥಾನ-> | .ಶೇಕಡ ಓಟು-> | ಹೆಚ್ಚು/ಕಡಿಮೆ | ಯು.ಪಿ.ಎ. | ಬಿ ಜೆ ಪಿ.ಸ್ಥಾನ-> | ಶೇಕಡ ಓಟು-> | ಹೆಚ್ಚು/ಕಡಿಮೆ. | +/-% | ಎನ್.ಡಿ.ಎ | ಪ್ರಧಾನಮಂತ್ರಿ |
|---|---|---|---|---|---|---|---|---|---|---|
| 1998 | 141 | 25.82% | - ೧ | 26.14% (26.42) | 182 | :25.59% | +25 | --- | 37.21%(46.61) | ಅಟಲ್ ಬಿಹಾರಿ ವಾಜಪೇಯಿ |
| 1999(0 | 114 | -- | -27 | Utd. Ft 28.30% | 182 | -- | -- | -- | 269+29 TDP;37.06% | ಅಟಲ್ ಬಿಹಾರಿ ವಾಜಪೇಯಿ |
| 2004 | 145 | 26.53% | 31:+7.1% | 218+117 /35.4% | 138 | 22.16% | -44 | -3.76% | ಎನ್.ಡಿ.ಎ(-89: 33.3%) | ಮನಮೋಹನ್ ಸಿಂಗ್ |
| 2009 | 206 +2 | 28.55% | +80:2.೦2% | 262 +63 ಇತರೆ (37.22%) | 116 | 18.80% | -22 | -3.36% | ಎನ್.ಡಿ.ಎ:159:24.63% (:-4.88%) |
ಮನಮೋಹನ್ ಸಿಂಗ್ |
| 2009-> | ಕಾಂ:ಪಡೆ ದ ಓಟು | 153482356 | -- | ಬಿಜೆಪಿ ಪಡೆದ ಓಟು | 102689312 | -- | -- | -- | -- | |
| 2014 1 | 44 | 19.4 | -9.2 | 58 | 283 | 31.2 | 116+167 | +12.4 | ಎನ್.ಡಿಎ.283+54=337 | ನರೇಂದ್ರ ಮೋದಿ |
| 2019 | 52 | 19.01% | +6 | 91 | 303 | 37.36 | 383+20 | +6.6 | ಎನ್.ಡಿ.ಎ. 303+50=353 | ನರೇಂದ್ರ ಮೋದಿ |
The National Anthem of India Jana Gana Mana, composed originally in Bengali by Rabindranath Tagore, was adopted in its Hindi version by the Constituent Assembly as the National Anthem of India on 24 January 1950.